ವಿಜಯ್ ಸೂರ್ಯ ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ ಮತ್ತು ನಿರೂಪಕನಾಗಿದ್ದಾರೆ. ಇವರು ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. == ವೈಯಕ್ತಿಕ ಜೀವನ == ವಿಜಯ್ ಸೂರ್ಯ ಸೆಪ್ಟಂಬರ್ ೭ ೧೯೯೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ನಾಗರಾಜ್, ತಾಯಿ ಲಲಿತಾಂಬ. ಫೆಬ್ರವರಿ ೧೪ ೨೦೧೯ ರಂದು ವಿಜಯ್ ಸೂರ್ಯ ರವರು ಚೈತ್ರಾ ಎಸ್ ರವರನ್ನು ವಿವಾಹವಾದರು. ವಿಜಯ್ ಮತ್ತು ಚೈತ್ರಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. === ಶಿಕ್ಷಣ === ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದಿದ್ದಾರೆ. ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಯುನಿವರ್ಸಿಟಿಯಲ್ಲಿ ಪಡೆದಿದ್ದಾರೆ. ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ಫಿಲಂ ಸ್ಕೂಲ್‌ನ 'ವಿಸ್ಲಿಂಗ್ ವುಡ್ಸ್ ಅಕಾಡೆಮಿ'ಯಲ್ಲಿ ನಟನೆಯ ಪದವಿಯನ್ನು ಪಡೆದು ಕೊಂಡಿದ್ದಾರೆ. == ವೃತ್ತಿ ಜೀವನ == ಫಿಲಂ ಸ್ಕೂಲ್ ನಿಂದ ಮರಳಿದ ಮೇಲೆ ಸಿಹಿ ಕಹಿ ಗೀತಾರವರ 'ಪಾರ್ವತಿ ಪರಮೇಶ್ವರ' ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜ಼ಿ ಲೋಕ' ಎಂಬ ಚಲನಚಿತ್ರದಲ್ಲಿ ಖ್ಯಾತ ನಟನಾದ ರವಿಚಂದ್ರನ್ ರವರ ಮಗನಾಗಿ ಪಾತ್ರ ನಿರ್ವಹಿಸುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಇವರು ಖ್ಯಾತ ನಟನಾದ ಜಾಕಿ ಶ್ರಾಫ್ ರವರ ಜೊತೆ "ಉಸ್ಸ್ ಪಾರ್" ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ತದನಂತರ ೨೦೧೪ ರಲ್ಲಿ 'ಅಗ್ನಿಸಾಕ್ಷಿ' ಎಂಬ ಧಾರಾವಾಹಿಯಲ್ಲಿ 'ಸಿದ್ದಾರ್ಥ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಟಾಕೀಸ್ ಎಂಬ ಕಾರ್ಯಕ್ರಮದ ನಿರೂಪಕರಾಗಿದ್ದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯಕಾಂತ್ ಕದಂಬ ಪಾತ್ರ ನಿರ್ವಹಿಸಿದ್ದಾರೆ. == ಚಲನಚಿತ್ರಗಳು == == ದೂರದರ್ಶನ == === ಧಾರಾವಾಹಿಗಳು === === ರಿಯಾಲಿಟಿ ಶೋ === == ಪ್ರಶಸ್ತಿಗಳು == == ಉಲ್ಲೇಖಗಳು ==